SEBI ನೇಮಕಾತಿ 2025: 110 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI Recruitment 2025)ನೇ ಸಾಲಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಮೂಲಕ ಆಫಿಸರ್ (ಸಹಾಯಕ ವ್ಯವಸ್ಥಾಪಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ವೇತನದ ಮತ್ತು ಸ್ಥಿರ ಭವಿಷ್ಯದ ಉದ್ಯೋಗಕ್ಕಾಗಿ ಇದು ಒಳ್ಳೆಯ ಅವಕಾಶವಾಗಿದೆ.

WhatsApp Group Join Now
Telegram Group Join Now

SEBI Recruitment 2025– ಸಂಪೂರ್ಣ ವಿವರಗಳು

ವಿವರ ಮಾಹಿತಿ
ಸಂಸ್ಥೆ ಹೆಸರು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI)
ಹುದ್ದೆಯ ಹೆಸರು ಆಫಿಸರ್ (ಸಹಾಯಕ ವ್ಯವಸ್ಥಾಪಕ)
ಒಟ್ಟು ಹುದ್ದೆಗಳು 110
ಉದ್ಯೋಗ ಸ್ಥಳ ಅಖಿಲ ಭಾರತ
ಅಧಿಕೃತ ವೆಬ್‌ಸೈಟ್ https://www.sebi.gov.in/
ಅರ್ಜಿ ಪ್ರಾರಂಭ ದಿನಾಂಕ 30-10-2025
ಅರ್ಜಿ ಕೊನೆಯ ದಿನಾಂಕ ಶೀಘ್ರದಲ್ಲೇ ಪ್ರಕಟಿಸಲಾಗುವುದು

ವಿದ್ಯಾರ್ಹತೆ

ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಗಳಲ್ಲಿ ಯಾವುದಾದರೂ ಪೂರೈಸಿರಬೇಕು:

  • ಪದವಿ / ಸ್ನಾತಕೋತ್ತರ ಪದವಿ / ಸ್ನಾತಕೋತ್ತರ ಡಿಪ್ಲೊಮಾ
  • LLB ಅಥವಾ BE / B.Tech

ವಯೋಮಿತಿ

  • ಅಭ್ಯರ್ಥಿಯು 30-09-2025 ರಂದು ಗರಿಷ್ಠ 30 ವರ್ಷಗಳ ವಯಸ್ಸಿನೊಳಗಿರಬೇಕು.
  • ಸರ್ಕಾರದ ನಿಯಮಾವಳಿಯ ಪ್ರಕಾರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಅರ್ಜಿ ಶುಲ್ಕ

ವರ್ಗ ಅರ್ಜಿ ಶುಲ್ಕ
SC / ST / PwBD ₹100 /-
UR / EWS / OBC ₹1000 /-
ಪಾವತಿ ವಿಧಾನ ಆನ್‌ಲೈನ್ ಮೂಲಕ

 

ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹62,500 ರಿಂದ ₹1,26,100 ವರೆಗೆ ವೇತನ ನೀಡಲಾಗುತ್ತದೆ. ಜೊತೆಗೆ, SEBI ನ ನಿಯಮಾವಳಿಯ ಪ್ರಕಾರ ಭತ್ಯೆ ಮತ್ತು ಸೌಲಭ್ಯಗಳೂ ದೊರೆಯುತ್ತವೆ.

ಆಯ್ಕೆ ವಿಧಾನ

  • ಆನ್‌ಲೈನ್ ಪರೀಕ್ಷೆ
  • ಸಂದರ್ಶನ

ಅಭ್ಯರ್ಥಿಗಳ ಅಂತಿಮ ಆಯ್ಕೆ ಈ ಎರಡೂ ಹಂತಗಳ ಫಲಿತಾಂಶದ ಆಧಾರದ ಮೇಲೆ ನಡೆಯುತ್ತದೆ.

SEBI Recruitment 2025 ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ವೆಬ್‌ಸೈಟ್ https://www.sebi.gov.in/ ಗೆ ಭೇಟಿ ನೀಡಿ.
  2. ಸಂಬಂಧಿತ SEBI ವಿಭಾಗವನ್ನು ಆಯ್ಕೆಮಾಡಿ.
  3. ಆಫಿಸರ್ (ಸಹಾಯಕ ವ್ಯವಸ್ಥಾಪಕ) ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
  4. ಆನ್‌ಲೈನ್ ಅರ್ಜಿ ಲಿಂಕ್ ತೆರೆಯಿರಿ.
  5. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  6. ಅರ್ಜಿ ಶುಲ್ಕ ಪಾವತಿಸಿ.
  7. ಅರ್ಜಿಯನ್ನು ಸಲ್ಲಿಸಿ, ದೃಢೀಕರಣದ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.

ಪ್ರಮುಖ ಲಿಂಕ್‌ಗಳು

ವಿವರಣೆ ಲಿಂಕ್
ಅಧಿಕೃತ ಅಧಿಸೂಚನೆ Click Here
ಅಪ್ಲೇ ಆನ್ಲೈನ್ Click Here
ಅಧಿಕೃತ ವೆಬ್‌ಸೈಟ್ Click Here

 

Also Read

ಸಹಾಯಕ ಗ್ರಂಥಪಾಲಕ ಹುದ್ದೆಗಳ ನೇಮಕಾತಿ | Assistant Librarian Recruitment 2025

 

Leave a Comment