ಗಡಿ ಭದ್ರತಾ ಪಡೆ (BSF Recruitment 2025)ನೇ ಸಾಲಿಗೆ ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರಕಾರಿ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಅರ್ಜಿಯನ್ನು ಸಲ್ಲಿಸಲು ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಹತೆಯನ್ನು ಪರಿಶೀಲಿಸಬಹುದು.
BSF Recruitment 2025 – ಪ್ರಮುಖ ವಿವರಗಳು
| ವಿವರ | ಮಾಹಿತಿ |
|---|---|
| ಹುದ್ದೆಯ ಹೆಸರು | ಕಾನ್ಸ್‌ಟೇಬಲ್ |
| ಒಟ್ಟು ಹುದ್ದೆಗಳು | 391 |
| ಉದ್ಯೋಗ ಸ್ಥಳ | ಅಖಿಲ ಭಾರತ |
| ಅಧಿಕೃತ ವೆಬ್‌ಸೈಟ್ | https://rectt.bsf.gov.in/ |
| ಅರ್ಜಿ ಪ್ರಾರಂಭ ದಿನಾಂಕ | 16-10-2025 |
| ಕೊನೆಯ ದಿನಾಂಕ | 04-11-2025 |
ವಿದ್ಯಾರ್ಹತೆ
ಅಭ್ಯರ್ಥಿಗಳು 10ನೇ ತರಗತಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ
- ಕನಿಷ್ಠ ವಯಸ್ಸು: 18 ವರ್ಷಗಳು
- ಗರಿಷ್ಠ ವಯಸ್ಸು: 23 ವರ್ಷಗಳು (01-08-2025 ರಂತೆ)
ವಯೋಮಿತಿ ಸಡಿಲಿಕೆ:
- OBC (NCL): 3 ವರ್ಷಗಳು
- SC/ST: 5 ವರ್ಷಗಳು
ಅರ್ಜಿ ಶುಲ್ಕ
- UR/OBC ಅಭ್ಯರ್ಥಿಗಳಿಗೆ: ₹159/-
- SC/ST/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
ಪಾವತಿ ವಿಧಾನ: ಆನ್‌ಲೈನ್ ಮೂಲಕ
ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ₹21,700 – ₹69,100/- ಮಾಸಿಕ ವೇತನ ನೀಡಲಾಗುತ್ತದೆ.
BSF Recruitment 2025 – ಆಯ್ಕೆ ವಿಧಾನ
- ದಾಖಲೆಗಳ ಪರಿಶೀಲನೆ
- ದೈಹಿಕ ಪರೀಕ್ಷೆ (PST)
- ಅರ್ಹತಾ ಪಟ್ಟಿ
- ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್ https://rectt.bsf.gov.in/ ಗೆ ಭೇಟಿ ನೀಡಿ.
- “Constable Recruitment 2025” ವಿಭಾಗವನ್ನು ಆಯ್ಕೆಮಾಡಿ.
- ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
- ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
- ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅರ್ಜಿ ಶುಲ್ಕ ಪಾವತಿ ಮಾಡಿ.
- ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್‌ಔಟ್ ತೆಗೆದು ಇಟ್ಟುಕೊಳ್ಳಿ.
ಪ್ರಮುಖ ಲಿಂಕ್‌ಗಳು
| Official Notification | Click Here |
| Apply Online | Click Here |
| Official Website | Click Here |