IBPS RRB 2025 ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ Notification Don’t Miss

ಕರ್ನಾಟಕದ ಕೆಲಸ ಬಯಸುವವರಿಗೆ ಸುವರ್ಣಾವಕಾಶ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ (RRBs) ಗ್ರೂಪ್ “ಎ” ಅಧಿಕಾರಿಗಳು (ಸ್ಕೇಲ್-I, II, III) ಮತ್ತು ಗ್ರೂಪ್ “ಬಿ” ಕಚೇರಿ ಸಹಾಯಕರು (ಬಹುಪಯೋಗಿ) ಹುದ್ದೆಗಳ ಭರ್ತಿಗಾಗಿ CRP RRBs-XIV ಸಾಮಾನ್ಯ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹ ಭಾಗವಹಿಸುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಹುದ್ದೆಗಳ ವಿವರಗಳು

ನೇಮಕಾತಿ ಸಂಸ್ಥೆ: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (IBPS)

ಹುದ್ದೆಗಳ ಹೆಸರು:

  • ಗ್ರೂಪ್ “ಎ” – ಅಧಿಕಾರಿಗಳು (ಸ್ಕೇಲ್-I, II ಮತ್ತು III)
  • ಗ್ರೂಪ್ “ಬಿ” – ಕಚೇರಿ ಸಹಾಯಕರು (ಬಹುಪಯೋಗಿ)

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಹುದ್ದೆಗಳ ಸಂಖ್ಯೆ:

  • ಕಚೇರಿ ಸಹಾಯಕರು (ಬಹುಪಯೋಗಿ): 250
  • ಅಧಿಕಾರಿ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ): 149
  • ಅಧಿಕಾರಿ ಸ್ಕೇಲ್-II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ): 75
  • ಅಧಿಕಾರಿ ಸ್ಕೇಲ್-II (ಐಟಿ ಅಧಿಕಾರಿ): 10
  • ಅಧಿಕಾರಿ ಸ್ಕೇಲ್-III (ಹಿರಿಯ ವ್ಯವಸ್ಥಾಪಕ): 25
  • (ಸೂಚನೆ: ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಬ್ಯಾಂಕಿನ ಅಗತ್ಯತೆಗೆ ಅನುಗುಣವಾಗಿ ಬದಲಾಗಬಹುದು.)

ವಿದ್ಯಾರ್ಹತೆ (21.09.2025ರ ಅನ್ವಯ)

ಕಚೇರಿ ಸಹಾಯಕರು (ಬಹುಪಯೋಗಿ):

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
  • ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ
  • ಕಂಪ್ಯೂಟರ್ ಜ್ಞಾನ ಅಗತ್ಯ

ಅಧಿಕಾರಿ ಸ್ಕೇಲ್-I:

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
  • ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಐಟಿ ಮುಂತಾದ ವಿಷಯಗಳಲ್ಲಿ ಪದವಿ ಪಡೆದವರಿಗೆ ಆದ್ಯತೆ
  • ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಮತ್ತು ಕಂಪ್ಯೂಟರ್ ಜ್ಞಾನ

ಅಧಿಕಾರಿ ಸ್ಕೇಲ್-II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ):

  • ಕನಿಷ್ಠ 50% ಅಂಕಗಳೊಂದಿಗೆ ಪದವಿ
  • ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ 2 ವರ್ಷಗಳ ಅನುಭವ

ಅಧಿಕಾರಿ ಸ್ಕೇಲ್-III (ಹಿರಿಯ ವ್ಯವಸ್ಥಾಪಕ):

  • ಕನಿಷ್ಠ 50% ಅಂಕಗಳೊಂದಿಗೆ ಪದವಿ
  • ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವ

ವಯೋಮಿತಿ (01.09.2025ರ ಅನ್ವಯ)

  • ಕಚೇರಿ ಸಹಾಯಕರು: 18 – 28 ವರ್ಷ
  • ಅಧಿಕಾರಿ ಸ್ಕೇಲ್-I: 18 – 30 ವರ್ಷ
  • ಅಧಿಕಾರಿ ಸ್ಕೇಲ್-II: 21 – 32 ವರ್ಷ
  • ಅಧಿಕಾರಿ ಸ್ಕೇಲ್-III: 21 – 40 ವರ್ಷ

ವಯೋಮಿತಿ ಸಡಿಲಿಕೆ:

  • SC/ST: 5 ವರ್ಷ
  • OBC: 3 ವರ್ಷ
  • PwBD: 10 ವರ್ಷ
  • ಮಾಜಿ ಸೈನಿಕರು: ಸೇವಾ ಅವಧಿ + 3 ವರ್ಷ (ಗರಿಷ್ಠ 50 ವರ್ಷ)

IBPS ಆಯ್ಕೆ ವಿಧಾನ

ಕಚೇರಿ ಸಹಾಯಕರು ಮತ್ತು ಅಧಿಕಾರಿ ಸ್ಕೇಲ್-I:

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ಅಧಿಕಾರಿ ಸ್ಕೇಲ್-I ಅಭ್ಯರ್ಥಿಗಳಿಗೆ ಸಂದರ್ಶನ

ಅಧಿಕಾರಿ ಸ್ಕೇಲ್-II ಮತ್ತು ಸ್ಕೇಲ್-III:

  • ಒಂದೇ ಹಂತದ ಆನ್‌ಲೈನ್ ಪರೀಕ್ಷೆ
  • ಸಂದರ್ಶನ

ಪ್ರಮುಖ ದಿನಾಂಕಗಳು

  • ಅರ್ಜಿ ನೋಂದಣಿ ಪ್ರಾರಂಭ: 01.09.2025
  • ಕೊನೆಯ ದಿನಾಂಕ: 28.09.2025 (ವಿಸ್ತರಿಸಲಾಗಿದೆ)
  • ಪೂರ್ವಭಾವಿ ಪರೀಕ್ಷೆ: ನವೆಂಬರ್/ಡಿಸೆಂಬರ್ 2025
  • ಫಲಿತಾಂಶ: ಡಿಸೆಂಬರ್ 2025 / ಜನವರಿ 2026
  • ಮುಖ್ಯ/ಸಿಂಗಲ್ ಪರೀಕ್ಷೆ: ಡಿಸೆಂಬರ್ 2025 / ಫೆಬ್ರವರಿ 2026
  • ಸಂದರ್ಶನ: ಜನವರಿ/ಫೆಬ್ರವರಿ 2026
  • ತಾತ್ಕಾಲಿಕ ಹಂಚಿಕೆ: ಫೆಬ್ರವರಿ/ಮಾರ್ಚ್ 2026

ಅರ್ಜಿ ಸಲ್ಲಿಸುವ ವಿಧಾನ

  • ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ
  • ಹೊಸ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಸಂಪೂರ್ಣ ಓದಿ
  • ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  • ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ, ಅಂತಿಮ ದೃಢೀಕರಣ ಪಡೆಯಿರಿ

IBPS ಪ್ರಮುಖ ಲಿಂಕುಗಳು

ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು.

Leave a Comment